ಸಂಪದ

ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು  ವಿಷಯಗಳ ಬಗ್ಗೆ  ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು  ಮತ್ತು ಚರ್ಚಿಸಲು ವೇದಿಕೆಯಾಗಿದೆ. ಸಂಪದವನ್ನು ಮೊದಲು ಹರಿಪ್ರಸಾದ್ ನಾಡಿಗ್ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಪ್ರಪಂಚಾದ್ಯಂತ ಕನ್ನಡಿಗರು ಇದುವರೆಗೂ ಬೆಳೆಸುತ್ತಾ ಬಂದಿದ್ದಾರೆ.  ಸಂಪದ.ನೆಟ್ ನಲ್ಲಿ  ಈಗಾಗಲೇ 5232 ಸದಸ್ಯರು, ಇದ್ದು, ಸುಮಾರು 3493 ಲೇಖನಗಳು, ಸುಮಾರು 4894 ಬ್ಲಾಗ್ ಗಳನ್ನೂ ಬರೆದಿದ್ದಾರೆ. ಇವರು ಬರೆದಂತಹ ಬ್ಲಾಗ್ ಗಳಿಗೆ ಸುಮಾರು 41829 ಪ್ರತಿಕ್ರಿಯೆಗಳು ಬಂದು ಸೇರಿವೆ (ದಿನಾಂಕ 24:12:2008 ಕ್ಕೆ ಅನುಗುಣವಾಗಿ ). ಸಂಪದದಲ್ಲಿ ಪ್ರತಿನಿತ್ಯಲು ಕಡಿಮೆ ಎಂದರು 10 ರಿಂದ 15 ಬ್ಲಾಗಗಳು ಬರೆಯುತ್ತಾರೆ. ನಾನು ಸಹ ಸಂಪದದಲ್ಲಿ ಸುಮಾರು 37 ಬ್ಲಾಗ್ ಗಳನ್ನು  ಮತ್ತು ಲೇಖನಗಳನ್ನು ಬರೆದಿದ್ದೇನೆ. ಸಂಪದ ನನಗೂ ಸಹ ಅಚ್ಚು ಮೆಚ್ಚಿನ ತಾಣವಾಗಿದೆ. ಈ ತಾಣದಲ್ಲಿ ವೀಕ್ಷಕರು ಮತ್ತು ಸದಸ್ಯರು ಸೇರಿ ಕಡಿಮೆ ಅಂದರು ಸುಮಾರು 100 ಜನ ಅದ್ರು ಆನ್ ಲೈನ್ ನಲ್ಲಿ ಇರುತ್ತಾರೆ.  ಈ ತಾಣಕ್ಕೆ ತಿಂಗಳಿಗೆ 5.5 ಮಿಲಿಯನ್ ವೀಕ್ಷಕರು  ಬೇಟಿಯನ್ನು ನೀಡುತ್ತಿದ್ದಾರೆ. ನೀವೇ ಯೋಚನೆ ಮಾಡಿ ಸಂಪದ ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಹತ್ತಿರವಾಗಿದೆ ಅಂತ.

ಸಂಪದ ಫೌಂಡೇಶನ್ ಸಂಪದ.net ಹಾಗೂ ಇತರ ಕನ್ನಡ ಯೋಜನೆಗಳನ್ನು ನಡೆಸಿಕೊಂಡು ಹೋಗಲು ಸ್ಥಾಪಿಸಲಾಗಿರುವ ಸಂಸ್ಥೆ. ಅಂತರ್ಜಾಲದಲ್ಲಿ ಯೂನಿಕೋಡ್ ಮೂಲಕ ಕನ್ನಡ ಬಳಸಿ ಕನ್ನಡಿಗರಲ್ಲಿ ಸಂವಹನ ಮೂಡಿಸಲು 2005 ರ ಜುಲೈ ನಲ್ಲಿ ಹುಟ್ಟು ಹಾಕಿದ ಸಂಪದ.net ತಾಣ ಕನ್ನಡ ಲೇಖನಗಳ ಆಗರ – ತನ್ನ ಉದ್ದೇಶದಲ್ಲಿ ಸಫಲವಾಗಿದೆ. ಈಗ ಸಂಪದ ಸಮುದಾಯದ ತಂತ್ರಜ್ಞರು, ತಂತ್ರಜ್ಞಾನ ಆಸಕ್ತರು ಒಟ್ಟಾಗಿ ಕನ್ನಡ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಬೇಕೆಂಬ ಉದ್ದೇಶ ಹೊಂದಿದ ಹಲವು ಯೋಜನೆಗಳನ್ನು ಈ ಸಂಸ್ಥೆಯ ಮೂಲಕ ಹಮ್ಮಿಕೊಂಡಿದೆ. ಸಂಪದ ಮುಖ್ಯವಾಗಿ ಅಂತರ್ಜಾಲದಲ್ಲಿ ಕನ್ನಡವನ್ನು ಬೆಳೆಸಲು ಪ್ರಾರಂಬಿಸಿದ್ದು, ಆಗಿನ ಕಾಲದಲ್ಲಿ ಕನ್ನಡದ ವೆಬ್ ಸೈಟ್ ಇಲ್ಲದ ಕಾರಣ ಇದ್ದರೂ ಸಹ ಬರಹ, ನುಡಿಯನ್ನು  ಬಳಸುತ್ತಿದ್ದರೆ ಹೊರೆತು ಯೂನಿಕೋಡ್ ಬಳಸಿ ಬರೆಯುತ್ತಿದ್ದುದು ಕಡಿಮೆ.

ಸಂಪದ ಫೌಂಡೇಶನ್ನಿನ ಪ್ರಸ್ತುತ ಯೋಜನೆಗಳು ಕೆಳಗಿನಂತಿವೆ:

  • ಸಂಪದ.ನೆಟ್ – ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ.
  • kannadalearning.org – ಮುಕ್ತ ಹಾಗೂ ಉಚಿತ ಆನ್ಲೈನ್ ಕನ್ನಡ ಕಲಿಕೆ ಕೇಂದ್ರ.
  • planetkannada.com – ಅಂತರ್ಜಾಲದ ಕನ್ನಡ ಪುಟಗಳನ್ನು ಒಂದೆಡೆಯೇ ಓದಲು ಸಾಧ್ಯವಾಗುವ ಕನ್ನಡ ಲೋಕ
  • Kannada Localization – ಕನ್ನಡ ಲೋಕಲೈಸೇಶನ್ ಯೋಜನೆ. ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶಗಳಾದ ಲಿನಕ್ಸ್ ಮುಂತಾದ ತಂತ್ರಾಂಶಗಳಲ್ಲಿ ಕನ್ನಡವನ್ನು ತರುವ ಒಂದು ಪ್ರಯತ್ನ.

ಸಂಪದ ಫೌಂಡೇಶನ್ನಿನ ಮೂಲಕ ಹಮ್ಮಿಕೊಳ್ಳಲಾಗಿರುವ ಹೊಸ ಯೋಜನೆಗಳು, ಕಾರ್ಯರೂಪಕ್ಕೆ ಇನ್ನೂ ಬರಬೇಕಿರುವ ಯೋಜನೆಗಳು ಕೆಳಗಿನಂತಿವೆ:

ಇದಲ್ಲದೆ, ಸಂಪದ ಫೌಂಡೇಶನ್ ಅಂತರ್ಜಾಲದಲ್ಲಿ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಹಲವು ಕನ್ನಡ ಅಂತರ್ಜಾಲ ತಾಣಗಳು ಓದುಗರಿಗೆ ಲಭ್ಯ:

ಸಂಪದ ಬರೀ ಬ್ಲಾಗಿಗೆ ಮಾತ್ರ ಸೀಮಿತವಾಗಬಾರದು, ಇನ್ನು ಹೆಚ್ಚಿನ  ಕೆಲಸಗಳನ್ನು ಮಾಡಬೇಕೆಂದು ಸಂಪದ ಸಮುದಾಯ ಹಲವಾರು ಕೆಲಸಗಳನ್ನು ಮಾಡುತ್ತಿದೆ. ಉದಾಹರಣೆಗೆ: ಲಿನೆಕ್ಸ್ ಹಬ್ಬ, ನೀರ ನಿಶ್ಚಿಂತೆ ಇತ್ಯಾದಿಗಳು

ಸಂಪದದಲ್ಲಿ ನೀವು ಸಹ ಕನ್ನಡದಲ್ಲಿ ನಿಮ್ಮದೇ ಆದ ಬ್ಲಾಗ್ ಗಳನ್ನೂ ಬರೆಯಬಹುದು. ಇನ್ನೇಕೆ ತಡ ನೀವು ಕೂಡಲೇ ಲಾಗಿನ್ ಆಗಿ ಸಂಪದ ಬಳಗದಲ್ಲಿ ಒಬ್ಬರಾಗಿ.

ಮಾಹಿತಿಯನ್ನು ಸಂಪದದಿಂದ ಪಡೆಯಲಾಗಿದೆ

About the Author

Nagaraj

After discovering his passion for media, he joined Namma Dhwani as a volunteer. Being a keen learner, he learned all practical aspects of community radio, from field recording and interviewing, to training and editing. He has niche expertise in community mobilization, awareness building for CR and managerial aspects. His interests range from gaming to information gathering to creating innovative programmes.

Leave a Reply

You can use these XHTML tags: <a href="" title=""> <abbr title=""> <acronym title=""> <blockquote cite=""> <code> <em> <strong>